Font size:
'ಕಾಂತಾರ: ಚಾಪ್ಟರ್ 1' ಚಿತ್ರವು ವಿಶ್ವಮಟ್ಟದಲ್ಲಿ ಭಾರಿ ಯಶಸ್ಸು ಕಂಡು, ಸಾವಿರ ಕೋಟಿ ಗಳಿಕೆಯತ್ತ ಸಾಗುತ್ತಿದೆ. ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ IMDB ಇಂಡಿಯಾ ಟ್ರೆಂಡಿಂಗ್ನಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದಿದ್ದಾರೆ. ಪ್ರೇಕ್ಷಕರ ನಿರೀಕ್ಷೆ ಮೀರಿ ಗೆದ್ದಿರುವ ಈ ಸಿನಿಮಾ, ಇಬ್ಬರ ಪಾತ್ರಗಳ ಮೂಲಕ ಮತ್ತಷ್ಟು ತೂಕ ಪಡೆದಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಪಡೆದ ಯಶಸ್ಸು ತುಂಬಾನೇ ದೊಡ್ಡದು. ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ಸಮೀಪಿಸುತ್ತಿದೆ. ರಿಷಬ್ ಶೆಟ್ಟಿ (Rishab Shetty) ಹಾಗೂ ರುಕ್ಮಿಣಿ ವಸಂತ್ ಅವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಆಗುತ್ತಿದೆ. ರಿಷಬ್ ಹಾಗೂ ರುಕ್ಮಿಣಿ ಹೆಸರು ಐಎಂಡಿಬಿ ಇಂಡಿಯಾ ಟ್ರೆಂಡ್ನಲ್ಲಿ ಅನುಕ್ರಮವಾಗಿ ಒಂದು ಹಾಗೂ ಎರಡನೇ ಸ್ಥಾನ ಪಡೆದುಕೊಂಡಿವೆ.
ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯನ್ನೂ ಮೀರಿ ಸಿನಿಮಾ ಗೆಲುವು ಕಂಡಿದೆ. ರಿಷಬ್ ಪಾತ್ರಕ್ಕೆ ಸಾಕಷ್ಟು ತೂಕ ಇದೆ. ಅದೇ ರೀತಿ, ರುಕ್ಮಿಣಿ ಪಾತ್ರ ಸಾಕಷ್ಟು ಶೇಡ್ಗಳನ್ನು ಹೊಂದಿದೆ. ಈ ಪಾತ್ರಗಳು ಸಿನಿಮಾ ತೂಕ ಹೆಚ್ಚಿಸಿದೆ. ಈಗ ಇವರ ಹೆಸರು ಟ್ರೆಂಡ್ನಲ್ಲಿರುವ ಬಗ್ಗೆ ಐಎಂಡಿಬಿ ಮಾಹಿತಿ ನೀಡಿದೆ.
Posted 1 month, 2 weeks ago







Comments
Leave a Comment